ಸೌರಮಿತ್ರ ಕರ್ನಾಟಕದಲ್ಲಿ ರೈತರಿಗೆ ಸೌರಶಕ್ತಿ ಆಧಾರಿತ ಪಂಪ್ ಸೆಟ್ ಅಳವಡಿಕೆ

ಸೌರಮಿತ್ರ ಕರ್ನಾಟಕದಲ್ಲಿ ರೈತರಿಗೆ ಸೌರಶಕ್ತಿ ಆಧಾರಿತ ಪಂಪ್ ಸೆಟ್ ಗಳನ್ನು ಅಳವಡಿಸಲು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು 

ದಾಖಲಾತಿಗಳು:

* ಪಹಣಿ

* ಆಧಾರ್ ಕಾರ್ಡ್

* ವೋಟರ್ ಐಡಿ/ರೇಷನ್ ಕಾರ್ಡ್


ಸಹಾಯಧನ (Subsidy):

  • ಕೇಂದ್ರ ಸರ್ಕಾರ ಶೇ. 30, ರಾಜ್ಯ ಸರ್ಕಾರ ಶೇ. 50ರಷ್ಟು ಸಹಾಯಧನ ನೀಡುತ್ತದೆ.
  • ರೈತರು ಶೇ. 20ರಷ್ಟು ಭರಿಸಬೇಕು. 

ಅರ್ಜಿ ಸಲ್ಲಿಸುವ ವಿಧಾನ:
  1. ನೋಂದಣಿ: souramitra.com ವೆಬ್‌ಸೈಟ್‌ಗೆ ಭೇಟಿ ನೀಡಿ, ಆಧಾರ್ ಮತ್ತು ಮೊಬೈಲ್ ನಂಬರ್ ಬಳಸಿ ನೋಂದಾಯಿಸಿಕೊಳ್ಳಿ.
  2. ಅರ್ಜಿ ಭರ್ತಿ: ವೈಯಕ್ತಿಕ ಮಾಹಿತಿ, ಭೂಮಿ ಮತ್ತು ಪಂಪ್‌ಸೆಟ್ ವಿವರಗಳನ್ನು ಭರ್ತಿ ಮಾಡಿ.
  3. ಮಾರಾಟಗಾರರ ಆಯ್ಕೆ: ಪೋರ್ಟಲ್‌ನಲ್ಲಿ ನೋಂದಾಯಿತ ಮಾರಾಟಗಾರರನ್ನು ಆಯ್ಕೆ ಮಾಡಿ.
  4. ದಾಖಲೆಗಳ ಸಲ್ಲಿಕೆ: ಗುರುತಿನ ಪುರಾವೆ, ಭೂ ಮಾಲೀಕತ್ವದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ವಂತಿಗೆ ಪಾವತಿ: ನಿಮ್ಮ ಪಾಲಿನ ಶೇ. 20ರಷ್ಟು ಹಣವನ್ನು ಪಾವತಿಸಿ.
  6. ಕ್ಷೇತ್ರ ಪರಿಶೀಲನೆ ಮತ್ತು ಅನುಮೋದನೆ: ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ.
  7. ಪಂಪ್‌ಸೆಟ್ ಅಳವಡಿಕೆ: ಅನುಮೋದನೆಯ ನಂತರ, ಅನುಮೋದಿತ ಮಾರಾಟಗಾರರು ಪಂಪ್‌ಸೆಟ್ ಅಳವಡಿಸುತ್ತಾರೆ. 

Post a Comment

Previous Post Next Post