ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ VA Recruitment 2026

 ಗ್ರಾಮ ಲೆಕ್ಕಾಧಿಕಾರಿ ಉಳಿಕೆ ಮೂಲ ವೃಂದ ಆರ್ ಪಿ ಸಿ ಒಟ್ಟು  505 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.

(ಸ್ಪರ್ಧಾತ್ಮಕ ಪರೀಕ್ಷಾ ಮೂಲಕ ಆಯ್ಕೆ ಮಾಡಲಾಗುತ್ತದೆ)


ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.


 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ
2. ದ್ವಿತೀಯ ಪಿ ಯು ಸಿ/ಐಟಿಐ/ಡಿಪ್ಲೋಮಾ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣ ಪತ್ರಗಳು
4. ಆಧಾರ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು ) 
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ
, ಯೋಜನಾ ನಿರಾಶ್ರಿತ ಪ್ರಮಾಣ ಪತ್ರ)

ವಿದ್ಯಾರ್ಹತೆ:

ದ್ವಿತೀಯ ಪಿ ಯು ಸಿ ಪಾಸಾಗಿರಬೇಕು ಅಥವಾ

ಐ ಟಿ ಐ, ಜೆಓಸಿ, ಡಿಪ್ಲೋಮಾ ಪಾಸಾಗಿರಬೇಕು (ಐ ಟಿ ಐ/ಜೆಓಸಿ/ಡಿಪ್ಲೋಮಾ ಅಭ್ಯರ್ಥಿಗಳು ಎನ್ ಐ ಓ ಎಸ್  ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ & ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಒಂದು  ಭಾಷೆ & ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ ಯು ಸಿ ಗೆ ತತ್ಸಮಾನವೆಂದು ಪರಿಗಣಿಸಲಾಗುವುದು).

 


ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-40 ವರ್ಷದೊಳಗಿರಬೇಕು.

2/2ಬಿ/3/3ಬಿ 18-43 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1 18-45 ವರ್ಷದೊಳಗಿರಬೇಕು. 

 

ಅರ್ಜಿ ಶುಲ್ಕ:

ಸಾಮಾನ್ಯ, 2/2ಬಿ/3/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500 ರೂ.ಗಳು

ಅಂಗವಿಕಲರಿಗೆ 250 ರೂ.ಗಳು


 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-07-2026

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-07-2026

ಶುಲ್ಕ ಪಾವತಿಸಲು ಕೊನೆಯ ದಿನಾಂಕ:31-07-2026

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.



 ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಮೊದಲನೇ ಮಹಡಿ ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ
























Post a Comment

Previous Post Next Post