ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ ಒಟ್ಟು 3991 ಹುದ್ದೆಗಳು

 ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ( ಪುರುಷ & ಮಹಿಳೆನಾನ್ ಕಲ್ಯಾಣ  ಕಲ್ಯಾಣ  ಕರ್ನಾಟಕ  ) ಒಟ್ಟು  3395+596 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. 


ವಿದ್ಯಾರ್ಹತೆ:
ದ್ವಿತೀಯ ಪಿ ಯು ಸಿ ಪಾಸಾಗಿರಬೇಕು ಅಥವಾ
ಐ ಟಿ ಐ, ಡಿಪ್ಲೋಮಾ ಪಾಸಾಗಿರಬೇಕು
(ಐ ಟಿ ಐ ಅಭ್ಯರ್ಥಿಗಳು ಎನ್ ಐ ಓ ಎಸ್  ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ & ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಒಂದು  ಭಾಷೆ & ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ ಯು ಸಿ ಗೆ ತತ್ಸಮಾನವೆಂದು ಪರಿಗಣಿಸಲಾಗುವುದು).


 ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-33 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1,2/2ಬಿ/3/3ಬಿ 18-35 ವರ್ಷದೊಳಗಿರಬೇಕು.

ಸೇವಾನಿರತ ಸಾಮಾನ್ಯ ಅಭ್ಯರ್ಥಿಗಳು 18-38 ವರ್ಷದೊಳಗಿರಬೇಕು.

ಎಸ್ ಸಿ/ಎಸ್ ಟಿ/ಪ್ರ-1,2/2ಬಿ/3/3ಬಿ 18-40 ವರ್ಷದೊಳಗಿರಬೇಕು.

 

ಅರ್ಜಿ ಶುಲ್ಕ:

ಸಾಮಾನ್ಯ, 2/2ಬಿ/3/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು

ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ/ತೃತೀಯ ಲಿಂಗ ಅಭ್ಯರ್ಥಿಗಳಿಗೆ 500 ರೂ.ಗಳು



 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿಅಂಕಪಟ್ಟಿ

2. ದ್ವಿತೀಯ ಪಿ ಯು ಸಿ/ಐಟಿಐ/ಡಿಪ್ಲೋಮಾ ಅಂಕಪಟ್ಟಿ
3.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)

4.ಜಾತಿ-ಆದಾಯ ಪ್ರಮಾಣ ಪತ್ರಗಳು

5. ಆಧಾರ್ ಕಾರ್ಡ್

6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )

7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)

8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯಾಗಿದ್ದಲ್ಲಿ)

 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:08-06-2026
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-07-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04-07-2026
ಪರೀಕ್ಷಾ ದಿನಾಂಕ: 02-08-2026


ನೋಟಿಫಿಕೇಷನ್ (ಆರ್ ಪಿ ಸಿ)

ನೋಟಿಫಿಕೇಷನ್ (ಕೆಕೆ)


 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.( ಆರ್ ಪಿ ಸಿ)

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.(ಕೆಕೆ)

ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಾರಿ ವಿಶೇಷವೆಂದರೆ, ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸಲಾಗುವ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ನಡೆಸಲಾಗುತ್ತಿದೆ.

ಈ ನೇಮಕಾತಿಯ ಸಂಪೂರ್ಣ ವಿವರಗಳು ಮತ್ತು ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:

ಹುದ್ದೆಗಳ ವಿವರ (Vacancies)

ಒಟ್ಟು 3,991 ಹುದ್ದೆಗಳನ್ನು ಎರಡು ಪ್ರತ್ಯೇಕ ಅಧಿಸೂಚನೆಗಳ ಮೂಲಕ ಹಂಚಿಕೆ ಮಾಡಲಾಗಿದೆ:

  • ಮಿಕ್ಕುಳಿದ ವೃಂದ (General/Mikkilida Cadre): 3,395 ಹುದ್ದೆಗಳು

  • ಕಲ್ಯಾಣ ಕರ್ನಾಟಕ ವೃಂದ (Kalyana-Karnataka - 371J): 596 ಹುದ್ದೆಗಳು

ಪ್ರಮುಖ ದಿನಾಂಕಗಳು (Important Dates)

ವಿವರದಿನಾಂಕ
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ08 ಜೂನ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03 ಜುಲೈ 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ04 ಜುಲೈ 2026
ಲಿಖಿತ ಪರೀಕ್ಷೆ ನಡೆಯುವ ತಾತ್ಕಾಲಿಕ ದಿನಾಂಕ02 ಆಗಸ್ಟ್ 2026

ಅರ್ಹತೆಗಳು (Eligibility Criteria)

  • ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಅಂಗೀಕೃತ ಮಂಡಳಿಯಿಂದ ಪಿಯುಸಿ (PUC / 12th Class) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • ವಯೋಮಿತಿ (Age Limit): ಈ ಬಾರಿ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

    • ಸಾಮಾನ್ಯ ಅರ್ಹತೆ (GM): 18 ರಿಂದ 33 ವರ್ಷಗಳು.

    • SC / ST / ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ: 18 ರಿಂದ 35 ವರ್ಷಗಳು.

ಅರ್ಜಿ ಶುಲ್ಕ (Application Fee)

  • ಸಾಮಾನ್ಯ ಅರ್ಹತೆ (GM) ಮತ್ತು ಹಿಂದುಳಿದ ವರ್ಗಗಳು (OBC): ರೂ. 750/-

  • SC, ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ: ರೂ. 500/-

ಆಯ್ಕೆ ಪ್ರಕ್ರಿಯೆ (Selection Process)

  1. ಲಿಖಿತ ಪರೀಕ್ಷೆ (Written Exam): KEA ವತಿಯಿಂದ ವಸ್ತುನಿಷ್ಠ (Objective Type) ಪರೀಕ್ಷೆ ನಡೆಯಲಿದ್ದು, ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ (0.25 ಋಣಾತ್ಮಕ ಅಂಕಗಳು ಇರುತ್ತವೆ).

  2. ದೈಹಿಕ ಜಾಗರೂಕತೆ ಮತ್ತು ಸಹಿಷ್ಣುತೆ ಪರೀಕ್ಷೆ (PST / PET):

    • ಪುರುಷರು: ಕನಿಷ್ಠ ಎತ್ತರ 168 ಸೆಂ.ಮೀ ಇರಬೇಕು. 1600 ಮೀಟರ್ ಓಟವನ್ನು 6 ನಿಮಿಷ 30 ಸೆಕೆಂಡ್‌ನಲ್ಲಿ ಮುಗಿಸಬೇಕು.

    • ಮಹಿಳೆಯರು: ಕನಿಷ್ಠ ಎತ್ತರ 157 ಸೆಂ.ಮೀ ಮತ್ತು ಕನಿಷ್ಠ 45 ಕೆಜಿ ತೂಕವಿರಬೇಕು. 400 ಮೀಟರ್ ಓಟವನ್ನು 2 ನಿಮಿಷದಲ್ಲಿ ಮುಗಿಸಬೇಕು.

  3. ವೈದ್ಯಕೀಯ ತಪಾಸಣೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆ.

ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (cetonline.karnataka.gov.in/kea) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.











ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ, ರಿಸಲ್ಟ್ ಇನ್ನಿತರ ಮಾಹಿತಿ ವೀಕ್ಷಿಸಲು ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ
ಈ ಕೆಳಗಿನ ಲಿಂಕ್  ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ

ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


 

How to Apply for Karnataka Governments Jobs


Visit the official website

Find the notification & read all the instructions carefully.

Make sure you have the documents you heard in the official notification before filling out the online application form.

Fill the application form with a Name, Father Name, Date of birth, address, mobile number, email, qualification details and more.

After filling the online application form .

Upload all required documents in the application.

Pay the application fees & take the application form printout. Keep the application form printed out until the end of the hiring process.




Post a Comment

Previous Post Next Post