ರೈಲ್ವೆ ಸೆಕ್ಷನ್ ಕಂಟ್ರೋಲರ್ ಒಟ್ಟು 368 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು
1 ಸೆಕ್ಷನ್ ಕಂಟ್ರೋಲರ್- ಈ ಹುದ್ದೆಗೆ ಯಾವುದೇ ಪದವಿ ಉತ್ತೀರ್ಣರಾಗಿರಬೇಕು
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 20-33 ವರ್ಷದೊಳಗಿರಬೇಕು.
ಓಬಿಸಿ 20-36 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ 20-38 ವರ್ಷದೊಳಗಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:14-10-2025
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. & ಪದವಿ ಅಂಕಪಟ್ಟಿಗಳು
2.ಜಾತಿ-ಆದಾಯ ಪ್ರಮಾಣ ಪತ್ರಗಳು(ಓಬಿಸಿ, ಇ ಡಬ್ಲ್ಯೂಎಸ್ )
3. ಓಬಿಸಿ ಪ್ರಮಾಣಪತ್ರ ( ಪ್ರ-1,2ಎ,2ಬಿ,3ಎ-ಗೊಲ್ಲ,ಉಪ್ಪಾರ,ಬೆಸ್ತ,ಕುರುಬ,ಒಕ್ಕಲಿಗ,ಮಡಿವಾಳ,ದೇವಾಂಗ,ಮುಸ್ಲಿಂ ಇತರರು)
4. ಇ ಡಬ್ಲ್ಯೂಎಸ್ ಪ್ರಮಾಣಪತ್ರ(ಲಿಂಗಾಯಿತ, ಬ್ರಾಹ್ಮಣ, ಮೊದಲಿಯಾರ್, ಇತರರು).
5. ಆಧಾರ್ ಕಾರ್ಡ್
6.ಪಾಸ್ ಪೋರ್ಟ್ ಸೈಜ್ ಪೋಟೋ(ವೈಟ್ ಬ್ಯಾಕ್ ಗ್ರೌಂಡ್ ಇರಬೇಕು)
7.ಬ್ಯಾಂಕ್ ಪಾಸ್ ಬುಕ್
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)
