ಪೇಜ್ ಸ್ಕಾಲರ್ ಶಿಪ್ 2025
ಯಾರು ಅರ್ಜಿ ಹಾಕಬಹುದು :
PUC (ಪ್ರಿ-ಯುನಿವರ್ಸಿಟಿ) , ಡಿ ಪ್ಲೋಮಾ (ಎಲ್ಲಾ ಶ್ರೇಣಿಗಳು) , ಅಥವಾ ITI ಕೋರ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ಹಾಸನ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಯಾದಗಿರಿ, ಕಲಬುರಗಿ, ರಾಯಚೂರು ಅಥವಾ ಗದಗ ಜಿಲ್ಲೆಗಳಲ್ಲಿರುವ ಕಾಲೇಜು/ಸಂಸ್ಥೆಯಲ್ಲಿ ಓದುತ್ತಿರುವವರು ಅರ್ಜಿ ಹಾಕಬಹುದು.
- ಕುಟುಂಬದ ಆದಾಯ:
- ಕುಟುಂಬದ ವಾರ್ಷಿಕ ಆದಾಯ ₹3.6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅಂಕಗಳು:
- ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
- ವಿಕಲಚೇತನರು, ಪೋಷಕರಿಲ್ಲದವರು ಅಥವಾ ಒಬ್ಬ ಪೋಷಕರನ್ನು ಹೊಂದಿರುವವರು ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
- ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳು ಮೊದಲ ಮತ್ತು ಎರಡನೇ ವರ್ಷದ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು (ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಕನಿಷ್ಠ 50%).
- ಕಾಲೇಜಿನ ಅರ್ಹತೆ:
- ಕಾಲೇಜು ಅಥವಾ ಸಂಸ್ಥೆಯು ಸಂಬಂಧಪಟ್ಟ ಮಂಡಳಿಯಿಂದ ಮಾನ್ಯತೆ ಪಡೆದಿರಬೇಕು ಮತ್ತು ಪಟ್ಟಿ ಮಾಡಲ್ಪಟ್ಟಿರಬೇಕು.
- ಅರ್ಹತೆಯಿಲ್ಲದವರು:
- ದೂರ ಶಿಕ್ಷಣದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು.
ಅಗತ್ಯವಿರುವ ದಾಖಲೆಗಳು
(ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು):
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (ಸ್ಕ್ಯಾನ್ ಮಾಡಿದ ಪ್ರತಿ)
- ಪ್ರಥಮ ವರ್ಷದ ಅಂಕಪಟ್ಟಿ (2ನೇ ವರ್ಷದ ವಿದ್ಯಾರ್ಥಿಗಳಿಗೆ) (ಸ್ಕ್ಯಾನ್ ಮಾಡಿದ ಪ್ರತಿ)
- ಈ ಕೆಳಗಿನ ಆದಾಯ ಪುರಾವೆಗಳಲ್ಲಿ ಯಾವುದಾದರೂ ಒಂದು (ಸ್ಕ್ಯಾನ್ ಮಾಡಿದ ಪ್ರತಿ):
- ಆದಾಯ ಪ್ರಮಾಣಪತ್ರ,or
- ಆದಾಯ ತೆರಿಗೆ ರಿಟರ್ನ್ (ಐ ಟಿ ಆರ್) ಮತ್ತು
- ಸಂಬಳ ಚೀಟಿ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ) (ಸ್ಕ್ಯಾನ್ ಮಾಡಿದ ಪ್ರತಿ)
- ಮರಣ ಪ್ರಮಾಣಪತ್ರ (ಅನಾಥ/ಒಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳಿಗೆ) (ಸ್ಕ್ಯಾನ್ ಮಾಡಿದ ಪ್ರತಿ)
- ಆಧಾರ್ ಕಾರ್ಡ್ (ಮೂಲದ ಸ್ಕ್ಯಾನ್ ಮಾಡಿದ ಪ್ರತಿ)
- ವಿದ್ಯಾರ್ಥಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಒಬ್ಬ ಪೋಷಕರ ಮೊಬೈಲ್ ಸಂಖ್ಯೆ
- ಕಾಲೇಜಿನ ಅಧಿಕೃತ ಇಮೇಲ್ ಐಡಿ
- ಬೋನಾಫೈಡ್ ಪ್ರಮಾಣಪತ್ರ (ಕೆಳಗಿನ ಲಿಂಕ್‌ನಿಂದ ಡೌನ್‌ಲೋಡ್ ಮಾಡಿ)
- ಸಹಿ ಮಾಡಲಾದ ಪೋಷಕರ ಒಪ್ಪಿಗೆಯ ದಾಖಲೆ (ಕೆಳಗಿನ ಲಿಂಕ್‌ನಿಂದ ಡೌನ್‌ಲೋಡ್ ಮಾಡಿ )
