ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್-ಸಿ ಎ ಆರ್, ಡಿ ಎ ಆರ್ (ನಾನ್ ಕಲ್ಯಾಣ & ಕಲ್ಯಾಣ ಕರ್ನಾಟಕ ) ಒಟ್ಟು 1421+179 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.
ವಿದ್ಯಾರ್ಹತೆ:
ದ್ವಿತೀಯ ಪಿ ಯು ಸಿ ಪಾಸಾಗಿರಬೇಕು ಅಥವಾ
ಐ ಟಿ ಐ, ಡಿಪ್ಲೋಮಾ ಪಾಸಾಗಿರಬೇಕು
(ಐ ಟಿ ಐ ಅಭ್ಯರ್ಥಿಗಳು ಎನ್ ಐ ಓ ಎಸ್ ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ & ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ & ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ ಯು ಸಿ ಗೆ ತತ್ಸಮಾನವೆಂದು ಪರಿಗಣಿಸಲಾಗುವುದು).
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-33 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1,2ಎ/2ಬಿ/3ಎ/3ಬಿ 18-35 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು
ಎಸ್ ಸಿ/ಎಸ್ ಟಿ/ಪ್ರ-1 ಅಭ್ಯರ್ಥಿಗಳಿಗೆ 500 ರೂ.ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:22.06.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-07-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24-07-2026
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2. ದ್ವಿತೀಯ ಪಿ ಯು ಸಿ/ಐಟಿಐ/ಡಿಪ್ಲೋಮಾ ಅಂಕಪಟ್ಟಿ
3.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
4.ಜಾತಿ-ಆದಾಯ ಪ್ರಮಾಣ ಪತ್ರಗಳು
5. ಆಧಾರ್ ಕಾರ್ಡ್
6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು
(ಉದಾ: ಯೋಜನಾ ನಿರಾಶ್ರಿತರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯಾಗಿದ್ದಲ್ಲಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(ಆರ್ ಪಿ ಸಿ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(ಕೆಕೆ)
ನಿಮ್ಮ ಮೊಬೈಲ್ ನಲ್ಲಿ ಪ್ರತಿದಿನ ಉದ್ಯೋಗ ಮಾಹಿತಿ, ಪರೀಕ್ಷಾ ದಿನಾಂಕ, ರಿಸಲ್ಟ್ ಇನ್ನಿತರ ಮಾಹಿತಿ ವೀಕ್ಷಿಸಲು ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.
ಉದ್ಯೋಗಮಾಹಿತಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
How to Apply for Karnataka Governments Jobs
udyogamahiti
udyogamahithi
udyoga mahiti
udyoga mahithi
https://udyogamahiti.blogspot.com/
ಸರ್ಕಾರಿ ಉದ್ಯೋಗ ಮಾಹಿತಿ 2026
ಕರ್ನಾಟಕ ಉದ್ಯೋಗ ಮಾಹಿತಿ 2026
ಸರ್ಕಾರಿ ಉದ್ಯೋಗ ಮಾಹಿತಿ App
ಉದ್ಯೋಗ ಮಾಹಿತಿ group
Karnataka udyoga mahiti 2026
ಉದ್ಯೋಗ ಮಾಹಿತಿ ಆಪ್
