ಭಾರತೀಯ ನೌಕಾಪಡೆ ಅಗ್ನಿವೀರ 01/2027 & 02/2027 ಬ್ಯಾಚ್ ನೇಮಕಾತಿ
ಭಾರತೀಯ ನೌಕಾಪಡೆಯಿಂದ ಅಗ್ನಿವೀರ (ಎಂ ಆರ್ & ಎಸ್ ಎಸ್ ಆರ್) ಹುದ್ದೆಗಳಿಗೆ ಅವಿವಾಹಿತ ಪುರುಷ & ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು 06-04-2026ರೊಳಗೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪಿ ಯು ಸಿ ಭೌತಶಾಸ್ತ್ರ, ಗಣಿತ ವಿಷಯದೊಂದಿಗೆ ಶೇ.50 ರಷ್ಟು ಅಂಕಗಳೊಂದಿಗೆ ಅಥವಾ
3 ವರ್ಷದ ಡಿಪ್ಲೋಮಾದೊಂದಿಗೆ ಉತ್ತೀರ್ಣರಾಗಿರಬೇಕು
ಪುರುಷ & ಮಹಿಳಾ ಅಭ್ಯರ್ಥಿಗಳ ಕನಿಷ್ಟ ಎತ್ತರ 157 ಸೆ.ಮೀ. ಇರಬೇಕು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14.03.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.04.2026
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
--ಉದ್ಯೋಗ ಮಾಹಿತಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರತಿದಿನ ಆಪ್ ಓಪನ್ ಮಾಡಿ ಸರ್ಕಾರಿ ಸೌಲಭ್ಯ, ಉದ್ಯೋಗ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವುದು--
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
* 10ನೇ ತರಗತಿ ಅಂಕಪಟ್ಟಿ
* ದ್ವಿತೀಯ ಪಿ ಯು ಸಿ(ಸೈನ್ಸ್) /ಡಿಪ್ಲೋಮಾ ಅಂಕಪಟ್ಟಿಗಳು
* ಪಾಸ್ ಪೋರ್ಟ್ ಸೈಜ್ ಪೋಟೋ( 1 ತಿಂಗಳೊಳಗಿನ ಪೋಟೋ)
* ಅಭ್ಯರ್ಥಿ ಸಹಿ
ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು /ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.
