Chitradurga Court Recruitment 2022

 

 ಚಿತ್ರದುರ್ಗ   ಜಿಲ್ಲಾ ನ್ಯಾಯಾಲಯದಲ್ಲಿ  ಜವಾನ ಪ್ರೊಸಸ್  ಸರ್ವರ್,  ಬೆರಳಚ್ಚುಗಾರ,  ಬೆರಳಚ್ಚು ನಕಲುಗಾರ  ಮತ್ತು ಶೀಘ್ರಲಿಪಿಕಾರ ಒಟ್ಟು 33 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

1.       ಜವಾನ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
 ಪ್ರೊಸಸ್ ಸರ್ವರ್-   ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2.      ಬೆರಳಚ್ಚುಗಾರ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು + ಕನ್ನಡ & ಇಂಗ್ಲೀಷ್ ಭಾಷೆಗಳಲ್ಲಿ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3.      ಬೆರಳಚ್ಚು ನಕಲುಗಾರ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು + ಕನ್ನಡ & ಇಂಗ್ಲೀಷ್ ಭಾಷೆಗಳಲ್ಲಿ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
4.      ಶೀಘ್ರಲಿಪಿಕಾರ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು + ಕನ್ನಡ & ಇಂಗ್ಲೀಷ್ ಭಾಷೆಗಳಲ್ಲಿ ಹಿರಿಯ ಶ್ರೇಣಿ  ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.
2/2ಬಿ/3/3ಬಿ 18-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-07-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-08-2022

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

 

Post a Comment

Previous Post Next Post