ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿ(ಉಳಿಕೆ ಮೂಲ ವೃಂದ-ಆರ್ ಪಿ ಸಿ) 2026
ಕನ್ನಡ ಭಾಷಾ ಶಿಕ್ಷಕರು: ಒಟ್ಟು ಹುದ್ದೆಗಳು 103
ಡಿಗ್ರಿಯಲ್ಲಿ ಕನ್ನಡ ಭಾಷೆಯನ್ನು ಐಚ್ಚಿಕ ವಿಷಯವಾಗಿ ಓದಿರಬೇಕು+ ಕನ್ನಡ ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ಅಥವಾ
ಡಿಗ್ರಿಯಲ್ಲಿ ಕನ್ನಡ ಭಾಷೆಯನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸದಿದ್ದಲ್ಲಿ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು
ಆಂಗ್ಲ ಭಾಷಾ ಶಿಕ್ಷಕರು: ಒಟ್ಟು ಹುದ್ದೆಗಳು 108
ಡಿಗ್ರಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಐಚ್ಚಿಕ ವಿಷಯವಾಗಿ ಓದಿರಬೇಕು+ ಇಂಗ್ಲೀಷ್ ಪದ್ಧತಿ(METHOD) ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ಅಥವಾ
ಡಿಗ್ರಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸದಿದ್ದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು
ಹಿಂದಿ ಭಾಷಾ ಶಿಕ್ಷಕರು: ಒಟ್ಟು ಹುದ್ದೆಗಳು 55
ಡಿಗ್ರಿಯಲ್ಲಿ ಹಿಂದಿ ಭಾಷೆಯನ್ನು ಐಚ್ಚಿಕ ವಿಷಯವಾಗಿ ಓದಿರಬೇಕು+ ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ಅಥವಾ
ಡಿಗ್ರಿಯಲ್ಲಿ ಹಿಂದಿ ಭಾಷೆಯನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸದಿದ್ದಲ್ಲಿ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು
ಗಣಿತ ಶಿಕ್ಷಕರು: ಒಟ್ಟು ಹುದ್ದೆಗಳು 103
ಡಿಗ್ರಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಐಚ್ಚಿಕ ವಿಷಯವಾಗಿ ಓದಿರಬೇಕು+ ವಿಜ್ಞಾನ ಪದ್ಧತಿಯಲ್ಲಿ(Method) ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ವಿಜ್ಞಾನ ಶಿಕ್ಷಕರು: ಒಟ್ಟು ಹುದ್ದೆಗಳು 106
ಡಿಗ್ರಿಯಲ್ಲಿ ರಸಾಯನಶಾಸ್ತ್ರ ಐಚ್ಚಿಕ ವಿಷಯವಾಗಿ+ ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ ಓದಿರಬೇಕು+ ವಿಜ್ಞಾನ ಪದ್ಧತಿಯಲ್ಲಿ(Method) ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ಸಮಾಜ ವಿಜ್ಞಾನ ಶಿಕ್ಷಕರು: ಒಟ್ಟು ಹುದ್ದೆಗಳು 154
ಕೆಳಕಂಡ ಯಾವುದೇ 2 ಐಚ್ಚಿಕ ವಿಷಯಗಳನ್ನು ತೆಗೆದುಕೊಂಡು ಕಲಾ ವಿಭಾಗದಲ್ಲಿ ಡಿಗ್ರಿ ಪಡೆದಿರಬೇಕು. ಎಂದರೆ:ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ & ಭೂಗೋಳಶಾಸ್ತ್ರ.
ಕಲಾ ವಿಭಾಗದಲ್ಲಿ (Arts Method) ಬಿ ಇಡಿ ಪದವಿ ಪಡೆದಿರಬೇಕು.+ ಟಿ ಇ ಟಿ/ಸಿ ಟಿ ಇ ಟಿ ಪಾಸಾಗಿರಬೇಕು.
ಗಣಕಯಂತ್ರ ಶಿಕ್ಷಕರು: ಒಟ್ಟು ಹುದ್ದೆಗಳು 57
ಇಂಜಿನಿಯರಿಂಗ್ ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ
ಅಥವಾ
ಬಿ ಸಿ ಎ
ಅಥವಾ
ಗಣಕ ವಿಜ್ಞಾನದೊಂದಿಗೆ ಬಿ ಎಸ್ ಸಿ ಪದವಿ ಪಡೆದಿರಬೇಕು
ದೈಹಿಕ ಶಿಕ್ಷಣ ಶಿಕ್ಷಕರು: ಒಟ್ಟು ಹುದ್ದೆಗಳು 81
ಡಿಗ್ರಿ+ ಬಿ ಪಿ ಇಡಿ ಪಾಸಾಗಿರಬೇಕು
ಇನ್ನೂ ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಷನ್ ಓದಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2. ದ್ವಿತೀಯ ಪಿ ಯು ಸಿ/ ಡಿಗ್ರಿ ಅಂಕಪಟ್ಟಿ/ಬಿ ಇಡಿ/ ಸ್ನಾತಕೋತ್ತರ ಡಿಗ್ರಿ ಅಂಕಪಟ್ಟಿ
3.ಜಾತಿ-ಆದಾಯ ಪ್ರಮಾಣ ಪತ್ರಗಳು
4. ಆಧಾರ್ ಕಾರ್ಡ್
5.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
6. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )
7. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
8.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಯೋಜನಾ ನಿರಾಶ್ರಿತ ಪ್ರಮಾಣ ಪತ್ರ)
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-45 ವರ್ಷದೊಳಗಿರಬೇಕು.
2ಎ/2ಬಿ/3ಎ/3ಬಿ 18-48 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-50 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 750 ರೂ.ಗಳು
ಎಸ್ ಸಿ/ಎಸ್ ಟಿ/ಪ್ರ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500 ರೂ.ಗಳು
ಅಂಗವಿಕಲರಿಗೆ 250 ರೂ.ಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:15-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-08-2026
ಶುಲ್ಕ ಪಾವತಿಸಲು ಕೊನೆಯ ದಿನಾಂಕ:14-08-2026