ಕೆ ಪಿ ಟಿ ಸಿ ಎಲ್ ನೇಮಕಾತಿ ಕಿರಿಯ ಪವರ್ ಮ್ಯಾನ್ & ಕಿರಿಯ ಸ್ಟೇಷನ್ ಪರಿಚಾರಕ ಒಟ್ಟು 2975 ಹುದ್ದೆಗಳು KPTCL Recruitment 2024

 ಕೆ ಪಿ ಟಿ ಸಿ ಎಲ್ ಕಿರಿಯ ಪವರ್ ಮ್ಯಾನ್ & ಕಿರಿಯ ಸ್ಟೇಷನ್ ಪರಿಚಾರಕ ಒಟ್ಟು  2975 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.


ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

 ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ. ಅಂಕಪಟ್ಟಿ
2.ಜಾತಿ-ಆದಾಯ ಪ್ರಮಾಣ ಪತ್ರಗಳು
3. ಆಧಾರ್ ಕಾರ್ಡ್+ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್
4.ಇತ್ತೀಚಿನ ಭಾವಚಿತ್ರ(ಪಾಸ್ ಪೋರ್ಟ್ ಸೈಜ್ ಪೋಟೋ)
5. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು ) 
6. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)
7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ, ಯೋಜನಾ ನಿರಾಶ್ರಿತ ಪ್ರಮಾಣ ಪತ್ರ)

ವಿದ್ಯಾರ್ಹತೆ:

ಎಸ್ ಎಸ್ ಎಲ್ ಸಿ ಪಾಸಾಗಿರಬೇಕು 

 ಉದ್ಯೋಗಮಾಹಿತಿ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.
2ಎ/2ಬಿ/3ಎ/3ಬಿ 18-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು. 

 

ಅರ್ಜಿ ಶುಲ್ಕ:
ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 614 ರೂ.ಗಳು
ಎಸ್ ಸಿ/ಎಸ್ ಟಿ/ಪ್ರ-1 ಅಭ್ಯರ್ಥಿಗಳಿಗೆ 378 ರೂ.ಗಳು
ಅಂಗವಿಕಲ ಅಭ್ಯರ್ಥಿಗಳಿಗೆ ಡಿ ಡಿ ಶುಲ್ಕ ಇರುವುದಿಲ್ಲ.


 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:21-10-2024

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.11.20214

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-11.2024

 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

ನೋಟಿಪಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 


 ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್, ಗಣಪತಿ ಪೆಂಡಾಲ್ ರಸ್ತೆ, ಅರಸೀಕೆರೆ. 9964528012

ಇತ್ತೀಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ






















Post a Comment

Previous Post Next Post