ಮಂಡ್ಯ ಡಿ ಸಿ ಸಿ ಬ್ಯಾಂಕ್ ಕಿರಿಯ ಸಹಾಯಕ, ಡ್ರೈವರ್ & ಅಟೆಂಡರ್ ಒಟ್ಟು 93 ಹುದ್ದೆಗಳ ನೇಮಕಾತಿ Mandya DCC Bank Recruitment 2024

 

ಮಂಡ್ಯ ಡಿ ಸಿ ಸಿ ಬ್ಯಾಂಕ್  ಕಿರಿಯ ಸಹಾಯಕ, ಡ್ರೈವರ್ & ಅಟೆಂಡರ್ ಒಟ್ಟು 93 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ

ಅರ್ಜಿದಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆ, ಮಾಹಿತಿಯನ್ನು ಓದಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಶುಲ್ಕ, ಇನ್ನಿತರ ಮಾಹಿತಿಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳನ್ನು ಮೊದಲೇ ಸಿದ್ದಪಡಿಸಿಕೊಂಡಿರಬೇಕು, ಈ ಮೂಲ ದಾಖಲಾತಿಗಳನ್ನು ನೇಮಕಾತಿ ಸಮಯದಲ್ಲಿ ಸಲ್ಲಿಸಬೇಕಾಗಿರುತ್ತದೆ.


ಆನ್ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜಾತಿ, ಉಪಜಾತಿ, ಲಿಂಗ, ಹುಟ್ಟಿದ ದಿನಾಂಕ, ಪ್ರಮಾಣಪತ್ರಗಳ ದಿನಾಂಕ, ಕನ್ನಡ ಅಭ್ಯರ್ಥಿಯೇ, ಗ್ರಾಮೀಣ ಅಭ್ಯರ್ಥಿಯೇ,ಯೋಜನಾ ನಿರಾಶ್ರಿತರೇ, ಮಾಜಿ ಸೈನಿಕರೇ, ಸೇವಾ ನಿರತ ಅಭ್ಯರ್ಥಿಯೇ, ಕಲ್ಯಾಣ ಕರ್ನಾಟಕ ಅಭ್ಯರ್ಥಿಯೇ,ವಿದ್ಯಾರ್ಹತೆ ಫಲಿತಾಂಶ ಪ್ರಕಟವಾದ ದಿನಾಂಕ, ಶೇಕಡವಾರು/ಅಂಕಗಳನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಸರಿಯಾಗಿ ನಮೂದಿಸಬೇಕು.

ಕಿರಿಯ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡವನ್ನು ಓದುವ ಸಾಮಾರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನ ಹೊಂದಿರಬೇಕು. ಒಟ್ಟು ಹುದ್ದೆಗಳು 70.

    ವಾಹನ ಚಾಲಕರು-  ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಕಾನೂನುಬದ್ದ ಡ್ರೆವಿಂಗ್ ಲೈಸನ್ಸ್ ಹೊಂದಿರಬೇಕು.ಒಟ್ಟು ಹುದ್ದೆಗಳು 2
     ಅಟೆಂಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.ಒಟ್ಟು ಹುದ್ದೆಗಳು 21.

ವಯೋಮಿತಿ:

ಸಾಮಾನ್ಯ ಅಭ್ಯರ್ಥಿಗಳು 18-35 ವರ್ಷದೊಳಗಿರಬೇಕು.
2/2ಬಿ/3/3ಬಿ 18-38 ವರ್ಷದೊಳಗಿರಬೇಕು.
ಎಸ್ ಸಿ/ಎಸ್ ಟಿ/ಪ್ರ-1 18-40 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-01-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-02-2024

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

1.ಎಸ್.ಎಸ್.ಎಲ್.ಸಿ. / ಪಿ ಯು ಸಿ ಅಂಕಪಟ್ಟಿಗಳು
2.ಜಾತಿ ಆದಾಯ ಪ್ರಮಾಣಪತ್ರ
3. ಆಧಾರ್ ಕಾರ್ಡ್
4.ಪಾಸ್ ಪೋರ್ಟ್ ಸೈಜ್ ಪೋಟೋ

5. ಕನ್ನಡ ಮಾಧ್ಯಮ ಪ್ರಮಾಣ ಪತ್ರ(1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಈ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು )

6. ಗ್ರಾಮೀಣ ಪ್ರಮಾಣಪತ್ರ (1-10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದರೆ ಈ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರಬೇಕು)

7.ಇನ್ನಿತರ ಮೀಸಲಾತಿ ದಾಖಲಾತಿಗಳು(ಉದಾ:ಅಂಗವಿಕಲರಾಗಿದ್ದಲ್ಲಿ, ಮಾಜಿ ಸೈನಿಕರಾಗಿದ್ದಲ್ಲಿ)

8. ಕಿರಿಯ ಸಹಾಯಕ ಹುದ್ದೆಗೆ ಕಂಪ್ಯೂಟರ್ ಸರ್ಟಿಪಿಕೇಟ್ ಇರಬೇಕು

  ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್  ಮಾಡಿ.

 

 ಅರ್ಜಿ ಸಲ್ಲಿಸಲು ಭೇಟಿಕೊಡಿ: ನಿರಂಜನ್ ಇಂಟರ್ ನೆಟ್ ಸೆಂಟರ್

ಹಾಸನ್ ಸರ್ಕಲ್ಗಣಪತಿ ಪೆಂಡಾಲ್ ರಸ್ತೆಅರಸೀಕೆರೆ. 9964528012

ನಮ್ಮಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Post a Comment

Previous Post Next Post