ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಶೇ.60ಕ್ಕಿಂತ ಅಧಿಕ ಅಂಕ ಪಡೆದವರಿಗೆ ಪ್ರೈಜ್ ಮನಿ ಸ್ಕಾಲರ್ ಶಿಪ್ ಗೆ ಅರ್ಜಿ ಕರೆದಿದ್ದಾರೆ.
ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ,ಡಿಗ್ರಿ, ಸ್ನಾತಕೋತ್ತರ ಡಿಗ್ರಿ, ಇಂಜಿನಿಯರಿಂಗ್, ಕೃಷಿ ವಿಜ್ಞಾನ,ವೆಟರ್ನರಿ, ಮೆಡಿಕಲ್ ಈ ಕೋರ್ಸುಗಳಲ್ಲಿ 2024-2025ನೇ ಸಾಲಿನಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿರುವವರು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1.ಎಸ್ ಎಸ್ ಎಲ್ ಸಿ ಅಂಕಪಟ್ಟಿ
2. ಪಿ ಯು ಸಿ ಓದಿರುವವರು ಪಿ ಯು ಸಿ ಅಂಕಪಟ್ಟಿ
3. ಪದವಿ/ಸ್ನಾತಕೋತ್ತರ ಪದವಿ ಓದಿರುವವರು ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು
4. ಆಧಾರ್ ಕಾರ್ಡ್(ಆಧಾರ್ ಲಿಂಕ್ ಆಗಿರುವ ಮೊಬೈಲ್)
5.ಬ್ಯಾಂಕ್ ಪಾಸ್ ಬುಕ್
6. ಜಾತಿ & ಆದಾಯ ಪ್ರಮಾಣ ಪತ್ರ
ಆನ್ ಲೈನ್
ಅರ್ಜಿ ಸಲ್ಲಿಸದ ನಂತರ ಕಳೆದ ವರ್ಷ 60% ಪಡೆದು ತೇರ್ಗಡೆಯಾದ ಕಾಲೇಜಿನ ಪ್ರಾಂಶುಪಾಲರಿಂದ ಅರ್ಜಿಗೆ ಸಹಿ ಮಾಡಿಸಿ, ಕಳೆದ ವರ್ಷ ಯಾವ ಜಿಲ್ಲೆಯಲ್ಲಿ ವಿದ್ಯಾಭ್ಯಾಸ
ಮಾಡಿದ್ದೀರೋ ಅದೇ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ದಾಖಲಾತಿಗಳನ್ನು ಕೊಡಬೇಕಾಗಿರುತ್ತದೆ.
*** ಪ್ರತಿದಿನದ ಉದ್ಯೋಗ ಮಾಹಿತಿಗಳಿಗಾಗಿ ಕೆಳಗಿನ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ***
